ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   et Kodus

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

17 [seitseteist]

Kodus

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಎಸ್ಟೋನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. Si-- o- m--- m---. Siin on meie maja. 0
ಮೇಲೆ ಚಾವಣಿ ಇದೆ. Ül---- o- k----. Üleval on katus. 0
ಕೆಳಗಡೆ ನೆಲಮಾಳಿಗೆ ಇದೆ. Al- o- k-----. All on kelder. 0
ಮನೆಯ ಹಿಂದೆ ಒಂದು ತೋಟ ಇದೆ. Ma-- t--- o- a--. Maja taga on aed. 0
ಮನೆಯ ಎದುರು ರಸ್ತೆ ಇಲ್ಲ. Ma-- e-- e- o-- t------. Maja ees ei ole tänavat. 0
ಮನೆಯ ಪಕ್ಕ ಮರಗಳಿವೆ. Ma-- k----- o- p---. Maja kõrval on puud. 0
ಇಲ್ಲಿ ನಮ್ಮ ಮನೆ ಇದೆ. Si-- o- m--- k-----. Siin on minu korter. 0
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. Si-- o- k--- j- v--------. Siin on köök ja vannituba. 0
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. Se-- o- e------ j- m----------. Seal on elutuba ja magamistuba. 0
ಮನೆಯ ಮುಂದಿನ ಬಾಗಿಲು ಹಾಕಿದೆ. Vä------ o- l----. Välisuks on lukus. 0
ಆದರೆ ಕಿಟಕಿಗಳು ತೆಗೆದಿವೆ. Ku-- a---- o- l----. Kuid aknad on lahti. 0
ಇಂದು ಸೆಖೆಯಾಗಿದೆ. Tä-- o- k---. Täna on kuum. 0
ನಾವು ಹಜಾರಕ್ಕೆ ಹೋಗುತ್ತಿದ್ದೇವೆ Me l---- e-------. Me lähme elutuppa. 0
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. Se-- o- d----- j- t-------. Seal on diivan ja tugitool. 0
ದಯವಿಟ್ಟು ಕುಳಿತುಕೊಳ್ಳಿ. Võ--- i----! Võtke istet! 0
ಅಲ್ಲಿ ನನ್ನ ಕಂಪ್ಯೂಟರ್ ಇದೆ. Se-- o- m--- a-----. Seal on minu arvuti. 0
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. Se-- s----- m- s------------. Seal seisab mu stereosüsteem. 0
ಟೆಲಿವಿಷನ್ ಬಹಳ ಹೊಸದು. Te----- o- t------ u--. Telekas on täiesti uus. 0

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.