ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   et Ujulas

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [viiskümmend]

Ujulas

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಎಸ್ಟೋನಿಯನ್ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. Tä-- o- k---. Täna on kuum. 0
ನಾವು ಈಜು ಕೊಳಕ್ಕೆ ಹೋಗೋಣವೆ? Lä--- u-------? Lähme ujulasse? 0
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? Ol--- s-- t--- u---- m----? Oleks sul tuju ujuma minna? 0
ನಿನ್ನ ಬಳಿ ಟವೆಲ್ ಇದೆಯೆ? Ka- s-- o- r----? Kas sul on rätik? 0
ನಿನ್ನ ಬಳಿ ಈಜು ಚಡ್ಡಿ ಇದೆಯೆ? Ka- s-- o- u-----------? Kas sul on ujumispüksid? 0
ನಿನ್ನ ಬಳಿ ಸ್ನಾನದ ಸೂಟು ಇದೆಯೆ? Ka- s-- o- t-----? Kas sul on trikoo? 0
ನಿನಗೆ ಈಜಲು ಬರುತ್ತದೆಯೆ? Os--- s- u----? Oskad sa ujuda? 0
ನಿನಗೆ ಧುಮುಕಲು ಆಗುತ್ತದೆಯೆ? Os--- s- s--------? Oskad sa sukelduda? 0
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? Os--- s- v---- h-----? Oskad sa vette hüpata? 0
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? Ku- o- d---? Kus on dušš? 0
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? Ku- o- r------------? Kus on riietuskabiin? 0
ಇಲ್ಲಿ ಈಜುಕನ್ನಡಕ ಎಲ್ಲಿದೆ? Ku- o- u------------? Kus on ujumisprillid? 0
ನೀರು ಆಳವಾಗಿದೆಯೆ? Ka- v--- o- s----? Kas vesi on sügav? 0
ನೀರು ಸ್ವಚ್ಚವಾಗಿದೆಯೆ? Ka- v--- o- p----? Kas vesi on puhas? 0
ನೀರು ಬೆಚ್ಚಗಿದೆಯೆ? Ka- v--- o- s--? Kas vesi on soe? 0
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. Mu- o- k---. Mul on külm. 0
ನೀರು ಕೊರೆಯುತ್ತಿದೆ. Ve-- o- l---- k---. Vesi on liiga külm. 0
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. Ma l---- n--- v---- v----. Ma lähen nüüd veest välja. 0

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.