ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   et midagi põhjendama 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [seitsekümmend viis]

midagi põhjendama 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಎಸ್ಟೋನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? Mi-- t- e- t---? Miks te ei tule? 0
ಹವಾಮಾನ ತುಂಬಾ ಕೆಟ್ಟದಾಗಿದೆ. Il- o- n-- h---. Ilm on nii halb. 0
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. Ma e- t---- s--- i-- o- n-- h---. Ma ei tule, sest ilm on nii halb. 0
ಅವನು ಏಕೆ ಬರುವುದಿಲ್ಲ? Mi-- t- e- t---? Miks ta ei tule? 0
ಅವನಿಗೆ ಆಹ್ವಾನ ಇಲ್ಲ. Ta e- o-- k-------. Ta ei ole kutsutud. 0
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. Ta e- t---- s--- t- e- o-- k-------. Ta ei tule, sest ta ei ole kutsutud. 0
ನೀನು ಏಕೆ ಬರುವುದಿಲ್ಲ? Mi-- s- e- t---? Miks sa ei tule? 0
ನನಗೆ ಸಮಯವಿಲ್ಲ. Mu- e- o-- a---. Mul ei ole aega. 0
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. Ma e- t---- s--- m-- e- o-- a---. Ma ei tule, sest mul ei ole aega. 0
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? Mi-- s- e- j--? Miks sa ei jää? 0
ನಾನು ಇನ್ನೂ ಕೆಲಸ ಮಾಡಬೇಕು. Ma p--- v--- t------. Ma pean veel töötama. 0
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. Ma e- j--- s--- p--- v--- t------. Ma ei jää, sest pean veel töötama. 0
ನೀವು ಈಗಲೇ ಏಕೆ ಹೊರಟಿರಿ? Mi-- t- j--- l-----? Miks te juba lähete? 0
ನಾನು ದಣಿದಿದ್ದೇನೆ. Ma o--- v------. Ma olen väsinud. 0
ನಾನು ದಣಿದಿರುವುದರಿಂದ ಹೊರಟಿದ್ದೇನೆ. Ma l----- s--- o--- v------. Ma lähen, sest olen väsinud. 0
ನೀವು ಈಗಲೇ ಏಕೆ ಹೊರಟಿರಿ? Mi-- t- j--- s------? Miks te juba sõidate? 0
ತುಂಬಾ ಹೊತ್ತಾಗಿದೆ. On j--- h----. On juba hilja. 0
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. Ma s------ s--- j--- o- h----. Ma sõidan, sest juba on hilja. 0

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.