ಪದಗುಚ್ಛ ಪುಸ್ತಕ

kn ಕೆಲಸಗಳು   »   af Aktiwiteite

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [dertien]

Aktiwiteite

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಫ್ರಿಕಾನ್ಸ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? Wa- d--- / m--- M-----? Wat doen / maak Martha? 0
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. Sy w--- o- k------. Sy werk op kantoor. 0
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. Sy w--- o- ’- r-------. Sy werk op ’n rekenaar. 0
ಮಾರ್ಥ ಎಲ್ಲಿದ್ದಾಳೆ? Wa-- i- M-----? Waar is Martha? 0
ಚಿತ್ರಮಂದಿರದಲ್ಲಿ ಇದ್ದಾಳೆ. In d-- b-------. In die bioskoop. 0
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Sy k-- ’- r-------. Sy kyk ’n rolprent. 0
ಪೀಟರ್ ಏನು ಮಾಡುತ್ತಾನೆ? Wa- d--- P----? Wat doen Peter? 0
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. Hy s------ b- d-- u-----------. Hy studeer by die universiteit. 0
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. Hy s------ t---. Hy studeer tale. 0
ಪೀಟರ್ ಎಲ್ಲಿದ್ದಾನೆ? Wa-- i- P----? Waar is Peter? 0
ಅವನು ಹೋಟೆಲ್ಲಿನಲ್ಲಿ ಇದ್ದಾನೆ. In d-- k----. In die kafee. 0
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. Hy d---- k-----. Hy drink koffie. 0
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? Wa------ g--- h---- g----? Waarheen gaan hulle graag? 0
ಸಂಗೀತ ಕಚೇರಿಗೆ. Na ’- k------. Na ’n konsert. 0
ಅವರಿಗೆ ಸಂಗೀತ ಕೇಳಲು ಇಷ್ಟ. Hu--- l------ g---- m-----. Hulle luister graag musiek. 0
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? Wa------ g--- h---- n-- g---- n--? Waarheen gaan hulle nie graag nie? 0
ಡಿಸ್ಕೋಗೆ. Na d-- d----. Na die disko. 0
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. Hu--- d--- n-- g---- n--. Hulle dans nie graag nie. 0

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!