ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   af Geselsies 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [twintig]

Geselsies 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆಫ್ರಿಕಾನ್ಸ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Ma-- j------ g-------! Maak jouself gemaklik! 0
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Ma-- j------ t---! Maak jouself tuis! 0
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Wa- w-- u d----? Wat wil u drink? 0
ನಿಮಗೆ ಸಂಗೀತ ಎಂದರೆ ಇಷ್ಟವೆ? Ho- u v-- m-----? Hou u van musiek? 0
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. Ek h-- v-- k-------- m-----. Ek hou van klassieke musiek. 0
ಇಲ್ಲಿ ನನ್ನ ಸಿ ಡಿ ಗಳಿವೆ. Hi-- i- m- C--. Hier is my CDs. 0
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? Sp--- u ’- m----- i---------? Speel u ’n musiek instrument? 0
ಇದು ನನ್ನ ಗಿಟಾರ್. Hi-- i- m- k-----. Hier is my kitaar. 0
ನಿಮಗೆ ಹಾಡಲು ಇಷ್ಟವೆ? Si-- u g----? Sing u graag? 0
ನಿಮಗೆ ಮಕ್ಕಳು ಇದ್ದಾರೆಯೆ? He- u k------? Het u kinders? 0
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? He- u ’- h---? Het u ’n hond? 0
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? He- u ’- k--? Het u ’n kat? 0
ಇವು ನನ್ನ ಪುಸ್ತಕಗಳು. Hi-- i- m- b----. Hier is my boeke. 0
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Ek l--- o- d-- o------ h------ b---. Ek lees op die oomblik hierdie boek. 0
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Wa- l--- u g----? Wat lees u graag? 0
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? Ga-- u g---- n- k------- t--? Gaan u graag na konserte toe? 0
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Ga-- u g---- t----- t--? Gaan u graag teater toe? 0
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? Ga-- u g---- o---- t--? Gaan u graag opera toe? 0

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.