ಪದಗುಚ್ಛ ಪುಸ್ತಕ

kn ಭೂತಕಾಲ ೧   »   lt Praeitis 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [aštuoniasdešimt vienas]

Praeitis 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಲಿಥುವೇನಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ra---i rašyti 0
ಅವನು ಒಂದು ಪತ್ರವನ್ನು ಬರೆದಿದ್ದ. Ji- (p-)r--- l-----. Jis (pa)rašė laišką. 0
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು O j- (u-)r--- a-------. O ji (už)rašė atviruką. 0
ಓದುವುದು. sk-----i skaityti 0
ಅವನು ಒಂದು ನಿಯತಕಾಲಿಕವನ್ನು ಓದಿದ್ದ. Ji- s----- i---------- ž------. Jis skaitė iliustruotą žurnalą. 0
ಅವಳು ಒಂದು ಪುಸ್ತಕವನ್ನು ಓದಿದ್ದಳು. O j- s----- k----. O ji skaitė knygą. 0
ತೆಗೆದು ಕೊಳ್ಳುವುದು im-i imti 0
ಅವನು ಒಂದು ಸಿಗರೇಟ್ ತೆಗೆದುಕೊಂಡ. Ji- p---- c-------. Jis paėmė cigaretę. 0
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. Ji p---- g------- š-------. Ji paėmė gabalėlį šokolado. 0
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. Ji- b--- n----------- b-- j- b--- i-------. Jis buvo neištikimas, bet ji buvo ištikima. 0
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. Ji- b--- t-------- b-- j- b--- d------. Jis buvo tinginys, bet ji buvo darbšti. 0
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. Ji- b--- n----------- b-- j- b--- t-------. Jis buvo neturtingas, bet ji buvo turtinga. 0
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. Ji- t----- n- p------ b-- s----. Jis turėjo ne pinigų, bet skolų. 0
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು Ji- n------- l------ j-- n-------. Jis neturėjo laimės, jam nesisekė. 0
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. Ja- n-------- j- p--------- n-------. Jam nesisekė, jį persekiojo nesėkmės. 0
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. Ji- b--- n- p----------- b-- n------------. Jis buvo ne patenkintas, bet nepatenkintas. 0
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. Ji- b--- n- l--------- b-- n----------. Jis buvo ne laimingas, bet nelaimingas. 0
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. Ji- b--- n- s----------- b-- n------------. Jis buvo ne simpatiškas, bet nesimpatiškas. 0

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.