ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   sq Bёj pyetje 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [gjashtёdhjetёedy]

Bёj pyetje 1

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   

ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. mё--j mёsoj 0
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? A m------ s---- n-------? A mёsojnё shumё nxёnёsit? 0
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Jo- m------ p--. Jo, mёsojnё pak. 0
   
ಪ್ರಶ್ನಿಸುವುದು py-s pyes 0
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? A e p----- s----- m-------? A e pyesni shpesh mёsuesin? 0
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Jo- n-- e p--- s-----. Jo, nuk e pyes shpesh. 0
   
ಉತ್ತರಿಸುವುದು. pё-------m pёrgjigjem 0
ದಯವಿಟ್ಟು ಉತ್ತರ ನೀಡಿ. Pё---------- j- l----. Pёrgjigjuni, ju lutem. 0
ನಾನು ಉತ್ತರಿಸುತ್ತೇನೆ. Un- p---------. Unё pёrgjigjem. 0
   
ಕೆಲಸ ಮಾಡುವುದು pu--j punoj 0
ಈಗ ಅವನು ಕೆಲಸ ಮಾಡುತ್ತಿದ್ದಾನಾ? A p- p---- a- t---? A po punon ai tani? 0
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Po- a- p- p----. Po, ai po punon. 0
   
ಬರುವುದು. vij vij 0
ನೀವು ಬರುತ್ತೀರಾ? A v---? A vini? 0
ಹೌದು, ನಾವು ಬೇಗ ಬರುತ್ತೇವೆ. Po- p- v---- t---. Po, po vijmё tani. 0
   
ವಾಸಿಸುವುದು. ba--j banoj 0
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? A b----- n- B-----? A banoni nё Berlin? 0
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Po- u-- b---- n- B-----. Po, unё banoj nё Berlin. 0
   

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.