ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   sq Bisedё e shkurtёr 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [njёzetenjё]

Bisedё e shkurtёr 2

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   
ಕನ್ನಡ ಆಲ್ಬೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? Ng- v---? Nga vini? 0
ಬಾಸೆಲ್ ನಿಂದ. Ng- B-----. Nga Bazeli. 0
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. Ba---- n------ n- Z-----. Bazeli ndodhet nё Zvicёr. 0
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? A m--- t--- p-------- m- z---- M----? A mund t’ju prezantoj me zotin Myler? 0
ಅವರು ಹೊರದೇಶದವರು. Ai ё---- i h---. Ai ёshtё i huaj. 0
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ Ai f--- d--- g----. Ai flet disa gjuhё. 0
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? Ёs--- h--- e p--- q- j--- k---? Ёshtё hera e parё qe jeni kёtu? 0
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. Jo- v---- e k----- i--- k---. Jo, vitin e kaluar isha kёtu. 0
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. Po- v---- p-- n-- j---. Por vetёm pёr njё javё. 0
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? A j- p----- k--- t- n-? A ju pёlqen kёtu te ne? 0
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. Sh--- m---. N------- j--- t- s--------. Shumё mirё. Njerёzit janё tё sjellshёm. 0
ಈ ಜಾಗ ನನಗೆ ತುಂಬ ಇಷ್ಟವಾಗಿದೆ. Dh- n----- m- p----- s----. Dhe natyra mё pёlqen shumё. 0
ನೀವು ಏನು ವೃತ್ತಿ ಮಾಡುತ್ತೀರಿ? Çf--- p--------- k---? Çfarё profesioni keni? 0
ನಾನು ಭಾಷಾಂತರಕಾರ. Ja- p--------. Jam pёrkthyes. 0
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. Un- p------- l----. Unё pёrkthej libra. 0
ನೀವು ಇಲ್ಲಿ ಒಬ್ಬರೇ ಇದ್ದೀರಾ? Ve--- j--- k---? Vetёm jeni kёtu? 0
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. Jo- g----- i-- / b---- i- ё---- g--------- k---. Jo, gruaja ime / burri im ёshtё gjithashtu kёtu. 0
ಅವರು ನನ್ನ ಇಬ್ಬರು ಮಕ್ಕಳು. Dh- a--- j--- t- d- f------ e m-. Dhe atje janё tё dy fёmijёt e mi. 0

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!