Тұз--ен--ұ-ыш -а-ке-е-.
Т__ б__ б____ т_ к_____
Т-з б-н б-р-ш т- к-р-к-
-----------------------
Тұз бен бұрыш та керек. 0 Tuz-b----u-ış-t--k-r--.T__ b__ b____ t_ k_____T-z b-n b-r-ş t- k-r-k------------------------Tuz ben burış ta kerek.
ಮಾತನಾಡುವುದು ಹೆಚ್ಚುಕಡಿಮೆ ಸುಲಭ.
ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ.
ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ.
ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ.
ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ.
ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು.
ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ.
ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು.
ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ.
ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ.
ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ.
ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ.
ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ.
ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು.
ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ.
ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು.
ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ.
ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ.
ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ.
ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ.
ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ.
ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ.
ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ.
ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ.
ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ.
ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ!
ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....