Тұ- б-н--ұрыш -ай--?
Т__ б__ б____ қ_____
Т-з б-н б-р-ш қ-й-а-
--------------------
Тұз бен бұрыш қайда? 0 Tuz b-------ş-q----?T__ b__ b____ q_____T-z b-n b-r-ş q-y-a---------------------Tuz ben burış qayda?
ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ.
ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ.
ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು.
ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ..
ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ.
ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ
ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು.
ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ.
ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ.
ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ.
ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ.
ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ.
ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು.
ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ
ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ.
ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು.
ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು.
ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು.
ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು.
ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು.
ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ.
ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ.
ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ.
ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ.
ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು.
ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ.
ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ.
ಆವಾಗ ತುಂಬಾ ಮಾತನಾಡಲಾಗುತ್ತದೆ.