Ал ко-у-а---я----ы--жүрө-.
А_ к_____ т___ а___ ж_____
А- к-л-н- т-я- а-ы- ж-р-т-
--------------------------
Ал колуна таяк алып жүрөт. 0 Al kolu-a ----- --ıp-jürö-.A_ k_____ t____ a___ j_____A- k-l-n- t-y-k a-ı- j-r-t----------------------------Al koluna tayak alıp jüröt.
ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು.
ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು.
ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು?
ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ.
ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ.
ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ.
ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ.
ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ.
ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ.
ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ.
ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ.
ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ.
ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ.
೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ.
ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ.
ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ.
೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ.
ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ.
ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು.
ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ.
ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ.
ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ.
ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ.
ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು.
ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು.
ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ.
ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು.
ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.